ಕುಲಶೇಖರ ಪಾಂಡ್ಯ
ಮಧುರೆಯ ಒಬ್ಬ ಪಾಂಡ್ಯ ದೊರೆ. ವಿಕ್ರಮ ಪಾಂಡ್ಯನ ಮೂಲಪುರುಷ. 1182ರಿಂದ 1190ರ ವರೆಗೆ ಆಳಿದ. 1166ರಿಂದ ಕುಲಶೇಖರನಿಗೂ ಪರಾಕ್ರಮ ಪಾಂಡ್ಯನಿಗೂ ಪಟ್ಟಕ್ಕಾಗಿ ಕಲಹ ನಡೆಯಿತು. ಪರಾಕ್ರಮ ಪಾಂಡ್ಯನನ್ನು ಕುಲಶೇಖರ ಕೊಂದು ಮಧುರೆಯನ್ನು ಆಕ್ರಮಿಸಿಕೊಂಡಾಗ ಪರಾಕ್ರಮ ಪಾಂಡ್ಯನ ಮಗನಾದ ವೀರಪಾಂಡ್ಯ ಸಿಂಹಳದ ದೊರೆಯಾದ ಪರಾಕ್ರಮ ಬಾಹುವಿನ ಸಹಾಯವನ್ನು ಯಾಚಿಸಿದ. ಕುಲಶೇಖರನಿಗೆ ಚೋಳರ ಬೆಂಬಲ ಸಿಕ್ಕಿತು. ಕುಲಶೇಖರ ಕೆಲಕಾಲದ ಅನಂತರ ಸಿಂಹಳದ ನೆರವಿನಿಂದ ಚೋಳರ ವಿರುದ್ಧ ಹೋರಾಡಿದ. ಆಗ ಚೋಳರು ವೀರಪಾಂಡ್ಯನಿಗೆ ನೆರವು ನೀಡಿ ಅವನಿಗೆ ಪಟ್ಟಕಟ್ಟಿದರು. 1182ರ ಹೊತ್ತಿಗೆ ಕುಲಶೇಖರ ತೀರಿಕೊಂಡ. ಚೋಳರು ವೀರಪಾಂಡ್ಯನನ್ನು ಪದಚ್ಯುತಗೊಳಿಸಿ ಕುಲಶೇಖರನ ಶಾಖೆಯ ವಿಕ್ರಮ ಪಾಂಡ್ಯನಿಗೆ ರಾಜ್ಯಾಭಿಷೇಕ ಮಾಡಿದರು.									
(ಎಸ್.ಎನ್.ಕೆ.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ